ಸೆಂಟರ್ ಫಾರ್ ಪೀಸ್ - ಶಾಂತಿಯ ಕೇಂದ್ರ

ಸೆಂಟರ್ ಫಾರ್ ಪೀಸ್ - ಶಾಂತಿಯ ಕೇಂದ್ರ ಒಂದು ಸಕರ್ಾರೇತರ ಸಂಸ್ಥೆ -ಎನ್ ಜಿ ಓ - ಜಾಗತಿಕ ಶಾಂತಿ ಮತ್ತು ಆಧ್ಯಾತ್ಮಿಕ ಜೀವನಕ್ಕಾಗಿ ಕೆಲಸ ಮಾಡುತ್ತಿರುವುದು. ಇದು ನವದೆಹಲಿಯ ಕೇಂದ್ರ ಸಂಸ್ಥೆ ಫಾರ್ ಪೀಸ್ ಮತ್ತು ಸ್ಪಿರಿಚ್ಯುಯಾಲಿಟಿಯ ಬೆಂಗಳೂರು ಶಾಖೆ.(www.cpsglobal.org) ನಮ್ಮ ಮಾರ್ಗದರ್ಶಕ ಮೌಲಾನಾ ವಹಿದುದ್ದೀನ್ ಖಾನ್ ರವರು ಶಾಂತಿಗಾಗ ಅನೇಕ ಅಂತರ ರಾಷ್ಟ್ರೀಯ ಮತ್ತು ರಾಷ್ಟ್ರೀಯ ಪ್ರಶಸ್ತಿಗಳನ್ನು ಪಡೆಡಿದ್ದಾರೆ. ಇವರು 2001 ರಲ್ಲಿ ಲಾಭೋದ್ದೇಶರಹಿತ ಸಕರ್ಾರೇತರ ಮತ್ತು ರಾಜಕೀಯ ಹೊರತಾದ ಸಂಸ್ಥೇಯನ್ನಾಗಿ ಸ್ಥಾಪಿಸಿದರು. ಮನೋ ಆದಾರಿತ - ಆದ್ಯಾತ್ಮಿಕ ಆಧಾರಿತವಾದ ರೀತಿಯಲ್ಲಿ ಶಾಂತಿಯ ಸಂಸ್ಕೃತಿಯನ್ನು ಬೆಳೆಸುವುದೇ ಈ ಸಂಸ್ಥೆಯ ಉದ್ದೇಶವಾಗಿದೆ. ಮೌಲಾನ ವಹೀದುದ್ದೀನ್ ಖಾನ್ ರವರು ಇಸ್ಲಾಂನ ಆಧ್ಯಾತ್ಮಿಕ ವಿದ್ವಾಂಸರು.

ಅವರು ಶಾಸ್ತ್ರಬದ್ಧ ಇಸ್ಲಾಂನ ಪಂಡಿತರು ಮಾತ್ರವಲ್ಲದೆ ಆಧುನಿಕ ವಿದ್ಯೆಗಳಲ್ಲೂ ಪರಿಣತರು. ಅವರ ಜೀವನದ ಉದ್ದೇಶವೇ ವಿಶ್ವಾದ್ಯಂತವಾಗಿ ಶಾಂತಿಯ ಸ್ಥಾಪನೆ. ಅವರಿಗೆ ಪದ್ಮಭೂಷಣ ಪ್ರಶಸ್ತಿ, ದಿ ಡೆಮಿಯುರ್ಗಸ್ ಅಂತರರಾಷ್ಟ್ರೀಯ ಶಾಂತಿ ಪ್ರಶಸ್ತಿ ಮತ್ತು ಮುಸ್ಲಿಂ ಸಮುದಾಯದಲ್ಲಿ ಶಾಂತಿಯನ್ನು ಉತ್ತೇಜಿಸುವುದಕ್ಕಾಗಿ ಇರುವ ಸಯ್ಯಿದಿನ್ ಇಮಾಂ ಆಲಿ ಹಸನ್ ಶಾಂತಿ ಪ್ರಶಸ್ತಿಗಳು ದೊರೆತಿವೆ.

ಅವರನ್ನು ವಿಶ್ವಕ್ಕೆ ಇಸ್ಲಾಂ ಧರ್ಮದ ಆಧ್ಯಾತ್ಮಿಕ ರಾಯಭಾರಿ ಎಂದು ಕರೆಯುತ್ತಾರೆ. ಅವರನ್ನು ಅತ್ಯಂತ ಪ್ರಭಾವಶಾಲಿ ಮುಸಲ್ಮಾನರು ಎಂದು ಗುರುತಿಸುತ್ತಾರೆ. ಅವರ ಪುಸ್ತಕಗಳನ್ನು 16 ಭಾಷೆ ಗಳಿಗೆ ತಜರ್ುಮೆ ಮಾಡಲಾಗಿದೆ. ಆರು ದೇಶಗಳಲ್ಲಿ ಅವರ ಪುಸ್ತಕಗಳು ವಿಶ್ವವಿದ್ಯಾನಿಲಯದ ಪಠ್ಯಗಳ ಭಾಗವಾಗಿದೆ.

ಟೈಂಸ್ ಆಫ್ ಇಂಡಿಯಾ ಪ್ರತಿಕೆಯ ಸ್ಪೀಕಿಂಗ್ಟ್ರೀ ವಿಭಾಗದಲ್ಲಿ ಅವರ ಬರಹಗಳು ಸತತವಾಗಿ ಪ್ರಕಟವಾಗುತ್ತಿವೆ. ಈ ವಿಭಾಗದ ಆಧ್ಯಾತ್ಮಿಕ ಗುರುಗಳಲ್ಲಿ ಅವರೂ ಒಬ್ಬರು. ನಮ್ಮ ಉದ್ದೇಶಿತ ಗುರಿ ಶಾಂತಿ ಮೌಲಾನಾ ಸಾಹೇಬರು ಇಸ್ಲಾಂನ ಅಧ್ಯಯನವನ್ನು ಅದರ ಮೂಲ ಸ್ತೋತ್ರಗಳಾದ ಕುರಾನ್ ಮತ್ತು ಹದಿಸ್ ಗಳಿಂದ ಮಾಡಿದ್ದಾರೆ.

ಅವರು ನಿಖರತೆಯಿಂದ ಸ್ಪಷ್ಟವಾಗಿ ಹೇಳುತ್ತಾರೆ ಇಸ್ಲಾಂನ ರಾಜಕೀಯ ಅಥರ್ೈಸುವಿಕೆ ಕಲ್ಪಿತವಾದ್ದೆಂದೂ, ಇಸ್ಲಾಂನ ನೈಜ ಸ್ವರೂಪ-ಪ್ರವಾದಿ ಮಹಮದ್(ಸ) ಅವರು ಮತ್ತು ಅವರ ಮೊದಲಿನ ಶಿಷ್ಯವರ್ಗದವರು ಅನುಸರಿಸಿದಂತೆ, ಅದು ಶಾಂತಿ, ಕರುಣೆ, ತಾಳ್ಮೆ ಮತ್ತು ಕ್ಷಮಾಗುಣಗಳಿಂದ ಕೂಡಿದ್ದು ಎಂದು.

ನಮ್ಮ ಉದ್ದೇಶ ವ್ಯಕ್ತಿಗಳಲ್ಲಿ ಬೌದ್ಧಿಕ ಕ್ರಾಂತಿಯನ್ನು ತರುವುದು. ಅದೂ ಅವರ ಮನಸ್ಸುಗಳನ್ನು ಸಕಾರಾತ್ಮಕವಾಗುವಂತೆ ಬದಲಿಸಿ ಅವರು ಸಮಾಜದ ಶಾಂತಿಬದ್ಧ ಸದಸ್ಯರಾಗುವಂತೆ ಮಾಡುವುದು.

ವಂದನೆಗಳು ಮತ್ತು ನಮನಗಳೊಂದಿಗೆ.